
ನವದೆಹಲಿಯಲ್ಲಿ ನಡೆದ 18ನೇ ಬ್ರಿಕ್ಸ್ ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ರಾಜತಾಂತ್ರಿಕ ವಿಶ್ಲೇಷಕರಾಗಿ 2017ರ ಬ್ಯಾಚ್ನ ಐಎಫ್ಎಸ್ ಅಧಿಕಾರಿ ಸಿದ್ಧಾರ್ಥ್ ಬಾಬು ಕಾರ್ಯನಿರ್ವಹಿಸಿದ್ದಾರೆ.
ಪ್ರಧಾನಿ ಮೋದಿ ಮತ್ತು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಹಾಗೂ ಚೀನಾ ಅಧ್ಯಕ್ಷ ಷಿ ಜಿನ್ಪಿಂಗ್ ನಡುವಿನ ಮಹತ್ವದ ದ್ವಿಪಕ್ಷೀಯ ಸಭೆಗಳಲ್ಲಿ ಬಾಬು ಜೊತೆಗಿದ್ದು ಅನುವಾದಕರಾಗಿ ನೆರವಾಗಿದ್ದಾರೆ.
ಕೇರಳದ ಕೊಚ್ಚಿಯವರಾದ ಸಿದ್ಧಾರ್ಥ್ ಬಾಬು ಅವರು ಮೆಕ್ಯಾನಿಕಲ್ ಎಂಜಿನಿಯರಿಂಗ್ ಮುಗಿಸಿ ಯುಪಿಎಸ್ಸಿ ನಾಗರಿಕ ಸೇವೆಯಲ್ಲಿ 15ನೇ ರ್ಯಾಂಕ್ ಪಡೆದು ವಿದೇಶಾಂಗ ಸೇವೆಯನ್ನು ಆಯ್ಕೆ ಮಾಡಿಕೊಂಡಿದ್ದರು.