
ಮಂಗಳೂರಿನಲ್ಲಿ ಮದುವೆಯಾಗಿ ಮಕ್ಕಳಿರುವ 40 ವರ್ಷದ ಧರ್ಮಗುರು ಅಶ್ರಫ್ ಸ ಅದಿ ಎಂಬಾತನ ಪ್ರೀತಿಯ ಬಲೆಗೆ ಬಿದ್ದ 22 ವರ್ಷದ ಯುವತಿ ಮಗದುಮ್ಮ ಪೋಷಕರ ಕಣ್ಣೀರನ್ನು ಲೆಕ್ಕಿಸದೆ ಆತನೊಂದಿಗೆ ಓಡಿಹೋಗಿದ್ದಾಳೆ.
ಕುಮಟಾದ ಮದರಸಾದಲ್ಲಿ ಧರ್ಮಶಿಕ್ಷಣಕ್ಕೆ ತೆರಳುತ್ತಿದ್ದ ಯುವತಿ ಆತನೊಂದಿಗೆ ಒಡನಾಟ ಬೆಳೆಸಿದ್ದು, ಕೊಣಾಜೆ ಠಾಣೆಯಲ್ಲಿ ಪೊಲೀಸರು ವಿಚಾರಣೆ ನಡೆಸಿದಾಗಲೂ ಧರ್ಮಗುರುವಿನ ಜೊತೆ ಹೋಗುವುದಾಗಿ ಹಠ ಹಿಡಿದಿದ್ದಾಳೆ.
ಧರ್ಮಶಿಕ್ಷಣದ ಹೆಸರಿನಲ್ಲಿ ಯುವತಿಗೆ ಮೊದಲ ಮದುವೆಯ ವಿಚಾರ ಮುಚ್ಚಿಟ್ಟು ಮೋಸ ಮಾಡಲಾಗಿದೆ ಎಂದು ಆರೋಪಿಸಿರುವ ಪೋಷಕರು ಧರ್ಮಗುರುವನ್ನು ಬಹಿಷ್ಕರಿಸುವಂತೆ ಒತ್ತಾಯಿಸಿದ್ದಾರೆ.