
ರಾಜ್ಯದಲ್ಲಿ ಆರೋಗ್ಯ ಸೇವೆಯನ್ನು ಬಲಪಡಿಸಲು ಡಿಸೆಂಬರ್ ಅಂತ್ಯದೊಳಗೆ 800 ಆಂಬುಲೆನ್ಸ್‌ಗಳ ಜಾಲವನ್ನು ಸಿದ್ಧಪಡಿಸಲಾಗುತ್ತಿದೆ ಎಂದು ಸಚಿವ ಯು.ಟಿ. ಖಾದರ್ ಘೋಷಿಸಿದ್ದಾರೆ.
ಹೊಸದಾಗಿ ನೇಮಕವಾದ ಆಂಬುಲೆನ್ಸ್ ಸಂಸ್ಥೆಗಳಿಗೆ 20-25 ನಿಮಿಷಗಳಲ್ಲಿ ರೋಗಿಯನ್ನು ಆಸ್ಪತ್ರೆಗೆ ತಲುಪಿಸುವ ಗುರಿ ನೀಡಲಾಗಿದ್ದು, ವಿಳಂಬವಾದರೆ 3,000 ರೂ. ದಂಡ ವಿಧಿಸಲಾಗುತ್ತದೆ.
ಮಹಿಳೆಯರ ಆರೋಗ್ಯಕ್ಕಾಗಿ ರಾಜ್ಯದಲ್ಲಿ ಪ್ರತ್ಯೇಕ 'ಮಹಿಳಾ ಆರೋಗ್ಯ ನೀತಿ'ಯನ್ನು ಜಾರಿಗೆ ತರಲಾಗುತ್ತಿದ್ದು, ಇದಕ್ಕಾಗಿ ಪ್ರತ್ಯೇಕ ವಿಭಾಗ ಮತ್ತು ಉಪನಿರ್ದೇಶಕರನ್ನು ನೇಮಿಸಲಾಗುತ್ತಿದೆ.