
ಜೆನ್ ಝೆಡ್ ಉದ್ಯೋಗಿಯೊಬ್ಬಳು ಮುಖಕ್ಕೆ ಫೇಸ್ ಪ್ಯಾಕ್ ಹಚ್ಚಿಕೊಂಡು ಆನ್ಲೈನ್ ಮೀಟಿಂಗ್ನಲ್ಲಿ ಪಾಲ್ಗೊಂಡ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಕೆಲಸದ ಸಮಯದಲ್ಲಿ ಫೇಸ್ ಪ್ಯಾಕ್ ಹಚ್ಚಿದ್ದನ್ನು ಮ್ಯಾನೇಜರ್ ಪ್ರಶ್ನಿಸಿದಾಗ, ಲಂಚ್ ಬ್ರೇಕ್ ಕೇವಲ 15 ನಿಮಿಷವಿದ್ದು, ಪ್ಯಾಕ್ ಒಣಗಲು 20 ನಿಮಿಷ ಬೇಕಾಗುತ್ತದೆ ಎಂದು ಯುವತಿ ಉತ್ತರಿಸಿದ್ದಾಳೆ.
ಈ ವಿಡಿಯೋವನ್ನು ಟೀಮ್ ಬ್ರಿಡ್ಜ್ರಸ್ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, ನೆಟ್ಟಿಗರು ಯುವತಿಯ ಧೈರ್ಯ ಮತ್ತು ಹಾಸ್ಯಮಯ ಪ್ರತಿಕ್ರಿಯೆಯನ್ನು ಮೆಚ್ಚಿದ್ದಾರೆ.