
ರಷ್ಯಾದಲ್ಲಿ ಸಂಸತ್ ಚುನಾವಣೆ ಮುಕ್ತಾಯದ ಹಂತದಲ್ಲಿದ್ದಾಗ ಉಕ್ರೇನಿಯನ್ ಪಡೆಗಳು ರಷ್ಯಾದ ಮೇಲೆ ಏಕಕಾಲದಲ್ಲಿ 1,000ಕ್ಕೂ ಹೆಚ್ಚು ಡ್ರೋನ್ಗಳನ್ನು ಹಾರಿಸಿ ದಾಳಿ ನಡೆಸಿವೆ.
ಮಾಸ್ಕೋ ಮೇಯರ್ ಸೆರ್ಗೆಯ್ ಸೊಬ್ಯಾನಿನ್ ಅವರ ಪ್ರಕಾರ, ಈ ದಾಳಿಯಿಂದ ನಗರದ ಪ್ರಮುಖ ತೈಲ ಸಂಸ್ಕರಣಾಗಾರ ಹಾಗೂ ವಸತಿ ಕಟ್ಟಡವೊಂದಕ್ಕೆ ಹಾನಿಯಾಗಿದೆ.
ಮಾಸ್ಕೋ ಪ್ರಾಂತ್ಯದ ಗವರ್ನರ್ ಆಂಡ್ರೇ ವೊರೊಬ್ಯೋವ್ ನೀಡಿದ ಮಾಹಿತಿಯಂತೆ, ಈ ಡ್ರೋನ್ ದಾಳಿಯಿಂದ ಇಬ್ಬರು ಸಾವನ್ನಪ್ಪಿದ್ದು, 20 ಜನರು ಗಾಯಗೊಂಡಿದ್ದಾರೆ.