
ಮೈಸೂರು ದಸರಾ ಮತ್ತು ರಜೆಗಳ ಹಿನ್ನೆಲೆಯಲ್ಲಿ ಅಕ್ಟೋಬರ್ 16 ರಿಂದ 20 ರವರೆಗೆ ಬೆಂಗಳೂರಿನಿಂದ ವಿವಿಧ ಮಾರ್ಗಗಳಲ್ಲಿ 3000ಕ್ಕೂ ಹೆಚ್ಚು ವಿಶೇಷ ಬಸ್‌ಗಳನ್ನು KSRTC ಕಾರ್ಯಾಚರಣೆಗೊಳಿಸಲಿದೆ.
ಪ್ರವಾಸಿಗರ ಅನುಕೂಲಕ್ಕಾಗಿ ಮೈಸೂರು ಹಾಗೂ ಸುತ್ತಮುತ್ತಲಿನ ಪ್ರೇಕ್ಷಣೀಯ ಸ್ಥಳಗಳಿಗೆ ಪ್ರತ್ಯೇಕ 700 ವಿಶೇಷ ಸಾರಿಗೆ ಬಸ್‌ಗಳನ್ನು ನಿಯೋಜಿಸಲಾಗಿದೆ.
ಪ್ರವಾಸಿಗರಿಗಾಗಿ ಅಕ್ಟೋಬರ್ 15 ರಿಂದ 26 ರವರೆಗೆ ಗಿರಿದರ್ಶಿನಿ, ಜಲದರ್ಶಿನಿ ಮತ್ತು ದೇವದರ್ಶಿನಿ ಸೇರಿದಂತೆ ವಿಶೇಷ ಒಂದು ದಿನದ ಪ್ರವಾಸ ಪ್ಯಾಕೇಜ್‌ಗಳನ್ನು ಘೋಷಿಸಲಾಗಿದೆ.