
ಇತ್ತೀಚೆಗೆ ವಿಶೇಷ ಪರಿಷ್ಕರಣೆ ವೇಳೆ ಮತದಾರರ ಪಟ್ಟಿಯಿಂದ ಕೈಬಿಡಲಾದವರ ವಿಚಾರವಾಗಿ ಸುಪ್ರೀಂ ಕೋರ್ಟ್ ಚುನಾವಣಾ ಆಯೋಗವನ್ನು ತರಾಟೆಗೆ ತೆಗೆದುಕೊಂಡಿತ್ತು.
ಮಹಾರಾಷ್ಟ್ರ, ತೆಲಂಗಾಣ ಹಾಗೂ ದೆಹಲಿ ಸೇರಿದಂತೆ 7 ರಾಜ್ಯಗಳ 4,51,76,997 ಡಿಲೀಟ್ ಆದ ಮತದಾರರಿಗೆ ತಮ್ಮ ಹಕ್ಕನ್ನು ಮರುಪಡೆಯಲು ಆಯೋಗ ಅವಕಾಶ ನೀಡಿದೆ.
ಮೂಲ ನಿವಾಸ ಬದಲಾಯಿಸದವರು ಎನ್ಯುಮರೇಷನ್ ಫಾರ್ಮ್ ಜೊತೆ ಕಾರಣ ಬರೆದು ಸಲ್ಲಿಸಬೇಕು ಎಂದು ಆಯೋಗ ಶುಕ್ರವಾರ ತಿಳಿಸಿದೆ.