Sports
ಏಷ್ಯನ್ ಗೇಮ್ಸ್‌ ಕುಸ್ತಿ: ಅಮನ್‌ಗೆ ಚಿನ್ನ, ಅಂತಿಮ್‌ಗೆ ಬೆಳ್ಳಿ

ಏಷ್ಯನ್ ಗೇಮ್ಸ್‌ ಕುಸ್ತಿ: ಅಮನ್‌ಗೆ ಚಿನ್ನ, ಅಂತಿಮ್‌ಗೆ ಬೆಳ್ಳಿ

prajavani1h
THE BRIEF
1

ಶನಿವಾರ ನಡೆದ ಏಷ್ಯನ್ ಗೇಮ್ಸ್‌ ಕುಸ್ತಿಯ ಪುರುಷರ 57 ಕೆ.ಜಿ. ವಿಭಾಗದ ಫೈನಲ್‌ನಲ್ಲಿ ಅಮನ್ ಸೆಹ್ರಾವತ್ ಅವರು ವಿಶ್ವ ಚಾಂಪಿಯನ್ ಚಾಂಗ್ ಸಾಂಗ್ ಹಾನ್ ಅವರನ್ನು 10-7 ಅಂತರದಿಂದ ಸೋಲಿಸಿ ಚಿನ್ನದ ಪದಕ ಗೆದ್ದುಕೊಂಡರು.

2

ಇದೇ ವೇಳೆ ಮಹಿಳೆಯರ 52 ಕೆ.ಜಿ. ವಿಭಾಗದ ಫೈನಲ್‌ನಲ್ಲಿ ಅಂತಿಮ್ ಪಂಘಲ್ ಅವರು ಆತಿಥೇಯ ಜಪಾನ್‌ನ ಮೊ ಮಿಯೂಕಾ ವಿರುದ್ಧ 1-9 ಅಂತರದಿಂದ ಸೋತು ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಯಿತು.

3

ಈ ಕ್ರೀಡಾಕೂಟದಲ್ಲಿ ಭಾರತದ ಕುಸ್ತಿಪಟುಗಳು ಒಟ್ಟು ಎರಡು ಚಿನ್ನ, ಎರಡು ಬೆಳ್ಳಿ ಹಾಗೂ ಎರಡು ಕಂಚಿನ ಪದಕಗಳೊಂದಿಗೆ ತಮ್ಮ ಅಭಿಯಾನವನ್ನು ಮುಕ್ತಾಯಗೊಳಿಸಿದರು.