
ಹಾರ್ಮೋನುಗಳ ಅಸಮತೋಲನದಿಂದ ಬರುವ ಪಿಸಿಒಎಸ್ ಸಮಸ್ಯೆಯನ್ನು ಈಗ ಪಿಎಂಒಎಸ್ ಎಂದು ಮರುನಾಮಕರಣ ಮಾಡಲಾಗಿದ್ದು, ಇದು ಭಾರತದಲ್ಲಿ ಪ್ರತಿ ನಾಲ್ಕು ಹುಡುಗಿಯರಲ್ಲಿ ಒಬ್ಬರಿಗೆ ಕಾಡುತ್ತಿದೆ.
ಅಂಡೋತ್ಪತ್ತಿ ಸರಿಯಾಗಿ ಆಗದಿರುವುದು, ಟೆಸ್ಟೋಸ್ಟಿರಾನ್ ಮಟ್ಟ ಹೆಚ್ಚಾಗುವುದು ಮತ್ತು ಅಲ್ಟ್ರಾಸೌಂಡ್ ಸ್ಕ್ಯಾನಿಂಗ್ನಲ್ಲಿ 12ಕ್ಕೂ ಹೆಚ್ಚು ಫಾಲಿಕಲ್ ಇರುವುದು ಈ ಸಮಸ್ಯೆಯ ಮುಖ್ಯ ಲಕ್ಷಣಗಳಾಗಿವೆ.
ಜೀವನಶೈಲಿ ಬದಲಾವಣೆ, ನಿಯಮಿತ ವ್ಯಾಯಾಮ ಮತ್ತು ಪ್ರೊಟೀನ್ಯುಕ್ತ ಆಹಾರ ಸೇವನೆಯಿಂದ ಈ ಸಮಸ್ಯೆಯನ್ನು ನಿಯಂತ್ರಿಸಬಹುದು ಎಂದು ವೈದ್ಯರು ಸಲಹೆ ನೀಡಿದ್ದಾರೆ.