
ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾದಲ್ಲಿ (NLSIU) ಸೆಪ್ಟೆಂಬರ್ 14ರಂದು ರಾಜಕೀಯ ಖೈದಿಗಳ ದಿನದ ಅಂಗವಾಗಿ ಉಮರ್ ಖಲೀದ್ ಕುರಿತಾದ ಡಾಕ್ಯುಮೆಂಟರಿ ಪ್ರದರ್ಶಿಸುವುದನ್ನು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಖಂಡಿಸಿದ್ದಾರೆ.
ಈ ಕಾರ್ಯಕ್ರಮವು ಕಾನೂನು ವಿದ್ಯಾರ್ಥಿಗಳಲ್ಲಿ ಎಡಪಂಥೀಯ ವಿಚಾರಧಾರೆಯನ್ನು ತುಂಬಿಸುವ ಪ್ರಯತ್ನವಾಗಿದ್ದು, ಕೂಡಲೇ ಇದನ್ನು ರದ್ದುಪಡಿಸಬೇಕೆಂದು ಅವರು ಕೇಂದ್ರ ಸಚಿವ ಅರ್ಜುನ್ ರಾಮ್ ಮೇಘವಾಲ್ ಅವರಿಗೆ ಒತ್ತಾಯಿಸಿದ್ದಾರೆ.
ದೇಶದ್ರೋಹಿಗಳನ್ನು ವೈಭವೀಕರಿಸುವ ಬದಲು ವೀರ ಸಾವರ್ಕರ್ ಅಥವಾ ಜತೀಂದ್ರನಾಥ್ ದಾಸರ ಕುರಿತು ಡಾಕ್ಯುಮೆಂಟರಿ ಮಾಡಬೇಕಿತ್ತು ಎಂದು ಯತ್ನಾಳ್ ಅಭಿಪ್ರಾಯಪಟ್ಟಿದ್ದಾರೆ.