
ಬೆಳಗಾವಿ ಜಿಲ್ಲೆಯ ನಿಪ್ಪಾಣಿ ಸಮೀಪ ನಿರ್ಮಾಣ ಹಂತದಲ್ಲಿದ್ದ ಬೆಂಗಳೂರು-ಪುಣೆ ರಾಷ್ಟ್ರೀಯ ಹೆದ್ದಾರಿ 48ರ ಸುಮಾರು 12 ಮೀಟರ್ ಉದ್ದದ ತಡೆಗೋಡೆ ಜುಲೈ 29ರಂದು ಕುಸಿದು ಬಿದ್ದಿದೆ.
ಭಾರಿ ಮಳೆಯಿಂದಾಗಿ ಮಣ್ಣಿನ ಅಡಿಯಲ್ಲಿ ನೀರು ಸೋರಿಕೆಯಾಗಿ ಸವೆತ ಉಂಟಾಗಿರುವುದು ತಡೆಗೋಡೆ ಕುಸಿತಕ್ಕೆ ಮುಖ್ಯ ಕಾರಣ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.
ಕಳಪೆ ಕಾಮಗಾರಿಯ ಹಿನ್ನೆಲೆಯಲ್ಲಿ ಎನ್‌ಎಚ್‌ಎಐ ಯೋಜನಾ ನಿರ್ದೇಶಕ, ಬ್ರಿಡ್ಜ್ ಇಂಜಿನಿಯರ್ ಮತ್ತು ರೆಸಿಡೆಂಟ್ ಇಂಜಿನಿಯರ್ ಅವರನ್ನು ಅಮಾನತುಗೊಳಿಸಿ ಗುತ್ತಿಗೆದಾರ ಸಂಸ್ಥೆಗೆ ಶೋಕಾಸ್ ನೋಟಿಸ್ ನೀಡಲಾಗಿದೆ.