Economy
ಶಿವಂ ಅಸೋಸಿಯೇಟ್ಸ್ ಹಗರಣ: ಶಿವಾನಂದ ನೀಲಣ್ಣನವರ್‌ಗೆ ಇಡಿ ಶಾಕ್, 427 ಕೋಟಿ ರೂ ಆಸ್ತಿ ಜಪ್ತಿ

ಶಿವಂ ಅಸೋಸಿಯೇಟ್ಸ್ ಹಗರಣ: ಶಿವಾನಂದ ನೀಲಣ್ಣನವರ್‌ಗೆ ಇಡಿ ಶಾಕ್, 427 ಕೋಟಿ ರೂ ಆಸ್ತಿ ಜಪ್ತಿ

tv9kannada1h
THE BRIEF
1

ಶಿವಂ ಅಸೋಸಿಯೇಟ್ಸ್ ಮಾಲೀಕ ಶಿವಾನಂದ ನೀಲಣ್ಣನವರ್‌ಗೆ ಜಾರಿ ನಿರ್ದೇಶನಾಲಯವು ಬಿಗ್ ಶಾಕ್ ನೀಡಿದ್ದು, ಹೂಡಿಕೆದಾರರ 2,459 ಕೋಟಿ ರೂ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ 427 ಕೋಟಿ ರೂ ಮೌಲ್ಯದ ಆಸ್ತಿಯನ್ನು ಜಪ್ತಿ ಮಾಡಿದೆ.

2

ಈ ಜಪ್ತಿ ಮಾಡಿದ ಆಸ್ತಿಗಳಲ್ಲಿ 367 ಕೋಟಿ ರೂ ಮೌಲ್ಯದ ಫಿಕ್ಸೆಡ್ ಡೆಪಾಸಿಟ್‌ಗಳು, 47 ಬ್ಯಾಂಕ್ ಖಾತೆಯಲ್ಲಿದ್ದ 44 ಕೋಟಿ ರೂ ಹಣ, 13 ಕೋಟಿ ರೂ ಸ್ಥಿರಾಸ್ತಿ ಹಾಗೂ 1.31 ಕೋಟಿ ರೂ ಷೇರು ಹೂಡಿಕೆ ಸೇರಿವೆ.

3

ಈ ಸಂಸ್ಥೆಯು 35 ಸಾವಿರಕ್ಕೂ ಹೆಚ್ಚು ಹೂಡಿಕೆದಾರರಿಂದ ಹಣ ಸಂಗ್ರಹಿಸಿದ್ದು, ಸಂಗ್ರಹಿಸಿದ ಹಣವನ್ನು ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿದ್ದರಿಂದ 185.95 ಕೋಟಿ ರೂ ನಿವ್ವಳ ನಷ್ಟ ಉಂಟಾಗಿರುವುದು ತನಿಖೆಯಲ್ಲಿ ಬಹಿರಂಗವಾಗಿದೆ.