
ಅಯೋಧ್ಯೆಯ ರಾಮ ಮಂದಿರ ಟ್ರಸ್ಟ್ನ ಮೊದಲ ಕಾರ್ಯದರ್ಶಿಯಾಗಿ ಐಐಟಿ ಬಾಂಬೆ ಪದವೀಧರ ಜಗದೀಶ್ ಅಫ್ಲೆ ಅವರನ್ನು ನೇಮಕ ಮಾಡಲಾಗಿದ್ದು, ಸೆಪ್ಟೆಂಬರ್ 2ರ ಸಭೆಯಲ್ಲಿ ಅಧಿಕೃತ ಮುದ್ರೆ ಬೀಳಲಿದೆ.
ಚಂಪತ್ ರಾಯ್ ಮತ್ತು ಡಾ. ಅನಿಲ್ ಮಿಶ್ರಾ ರಾಜೀನಾಮೆಯಿಂದ ಉಂಟಾದ ಆಡಳಿತಾತ್ಮಕ ಬಿಕ್ಕಟ್ಟನ್ನು ಬಗೆಹರಿಸಲು ಅಫ್ಲೆ ಅವರನ್ನು ಎಸ್ಬಿಐ ಬ್ಯಾಂಕ್ ಖಾತೆಗಳ ಅಧಿಕೃತ ಸಹಿದಾರರನ್ನಾಗಿ ನೇಮಿಸಲಾಗಿದೆ.
ಟ್ರಸ್ಟ್ನ ಸಿಇಒ ಹುದ್ದೆಗಾಗಿ 5,200 ಅರ್ಜಿಗಳು ಬಂದಿದ್ದು, ನಿವೃತ್ತ ನ್ಯಾಯಾಧೀಶ ಪ್ರಮೋದ್ ಕೊಹ್ಲಿ ನೇತೃತ್ವದ ಸಮಿತಿಯು ಪರಿಶೀಲನೆ ನಡೆಸುತ್ತಿದೆ.