
ತಿರುಮಲ ಶ್ರೀವಾರಿ ದರ್ಶನ ಮತ್ತು ವಸತಿ ಬುಕಿಂಗ್ ಹೆಸರಿನಲ್ಲಿ ಭಕ್ತರಿಗೆ ವಂಚಿಸುತ್ತಿದ್ದ 259 ನಕಲಿ ವೆಬ್‌ಸೈಟ್‌ಗಳನ್ನು ಟಿಟಿಡಿ ಐಟಿ ವಿಭಾಗ ಮತ್ತು ಸೈಬರ್ ಕ್ರೈಮ್ ಪೊಲೀಸರು ಜಂಟಿಯಾಗಿ ಬಂದ್ ಮಾಡಿದ್ದಾರೆ.
ವಂಚಕರು ಟಿಟಿಡಿಯ ಅಧಿಕೃತ ಲೋಗೋ ಮತ್ತು ಹೆಸರನ್ನು ಬಳಸಿ ವಾಟ್ಸಾಪ್ ಹಾಗೂ ಸಾಮಾಜಿಕ ಮಾಧ್ಯಮಗಳ ಮೂಲಕ ಭಕ್ತರಿಂದ ಬೃಹತ್ ಮೊತ್ತದ ಹಣವನ್ನು ಅಕ್ರಮವಾಗಿ ವಸೂಲಿ ಮಾಡುತ್ತಿದ್ದರು.
ಕಳೆದ ಎರಡು ವರ್ಷಗಳಲ್ಲಿ ನಡೆದ ಈ ಅಕ್ರಮಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗಿದ್ದು, ಭಕ್ತರು ಕೇವಲ ಟಿಟಿಡಿಯ ಅಧಿಕೃತ ವೆಬ್‌ಸೈಟ್ ಅಥವಾ ಮೊಬೈಲ್ ಆಪ್ ಮೂಲಕವೇ ಬುಕಿಂಗ್ ಮಾಡುವಂತೆ ಸೂಚಿಸಲಾಗಿದೆ.