
ಪ್ರಕೃತಿ ವಿಕೋಪ ಅಥವಾ ಕೋಮು ಹಿಂಸಾಚಾರದಿಂದ ಮನೆ ಅಥವಾ ಅಂಗಡಿಗೆ ಹಾನಿಯಾದ ಅಲ್ಪಸಂಖ್ಯಾತ ಸಮುದಾಯದ ಕುಟುಂಬಗಳು ಕರ್ನಾಟಕ ಸರ್ಕಾರದ ‘ಸಾಂತ್ವನ ಯೋಜನೆ'ಯಡಿ ಗರಿಷ್ಠ 5 ಲಕ್ಷ ರೂ. ಆರ್ಥಿಕ ನೆರವು ಪಡೆಯಬಹುದಾಗಿದೆ.
ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ (KMDC)ದಿಂದ ದೊರೆಯುವ ಈ ನೆರವಿನಲ್ಲಿ ಶೇ.50 ಸಹಾಯಧನ (ಸಬ್ಸಿಡಿ) ಆಗಿದ್ದು, ಉಳಿದ ಶೇ.50 ಮರುಪಾವತಿಸಬೇಕಾದ ಸಾಲ ರೂಪದಲ್ಲಿ ನೀಡಲಾಗುತ್ತದೆ.
ಅರ್ಜಿದಾರರು ಕರ್ನಾಟಕದ ಮಾನ್ಯತೆ ಪಡೆದ ಧಾರ್ಮಿಕ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದವರಾಗಿರಬೇಕು, 18 ರಿಂದ 55 ವರ್ಷಗಳೊಳಗೆ ಇರಬೇಕು ಮತ್ತು ಕುಟುಂಬದ ವಾರ್ಷಿಕ ಆದಾಯ 8 ಲಕ್ಷ ಮೀರಿರಬಾರದು.