
ದಸರಾ ಮತ್ತು ದೀಪಾವಳಿ ಹಬ್ಬಗಳ ಪ್ರಯಾಣಿಕರ ದಟ್ಟಣೆ ನಿಭಾಯಿಸಲು ನೈರುತ್ಯ ರೈಲ್ವೆಯು ಯಶವಂತಪುರ-ಶಿವಮೊಗ್ಗ ಟೌನ್ ಎಕ್ಸ್ಪ್ರೆಸ್ ರೈಲನ್ನು ತಾಳಗುಪ್ಪವರೆಗೆ ವಿಸ್ತರಿಸಿದ್ದು, ಅಕ್ಟೋಬರ್ 18ರಿಂದ ನವೆಂಬರ್ 12ರವರೆಗೆ ಜಾರಿಯಲ್ಲಿರಲಿದೆ.
ಈ ವಿಸ್ತೃತ ಸೇವೆಯು ಪ್ರತಿ ದಿಕ್ಕಿನಲ್ಲಿ ಒಟ್ಟು 11 ಟ್ರಿಪ್ಗಳವರೆಗೆ ಲಭ್ಯವಿರಲಿದ್ದು, ರೈಲಿನ ಸಂಯೋಜನೆ ಮತ್ತು ಸಂಚರಿಸುವ ದಿನಗಳಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ರೈಲ್ವೆ ಇಲಾಖೆ ತಿಳಿಸಿದೆ.
ಪೆನುಕೊಂಡ-ನಾಗಸಮುದ್ರಂ-ಧರ್ಮಾವರಂ ವಿಭಾಗದಲ್ಲಿ ರೈಲ್ವೆ ಹಳಿ ದ್ವಿಗುಣಗೊಳಿಸುವ ಕಾಮಗಾರಿ ನಡೆಯುತ್ತಿರುವುದರಿಂದ ಅಕ್ಟೋಬರ್ 16ರಿಂದ ಗರೀಬ್ ರಥ್ ಸೇರಿದಂತೆ ಒಟ್ಟು 10 ರೈಲುಗಳ ಮಾರ್ಗವನ್ನು ಬದಲಾಯಿಸಲಾಗಿದೆ.