
ಅರಾವಳಿ ಎಕ್ಸ್‌ಪ್ರೆಸ್ ರೈಲಿನಲ್ಲಿ ಸೀಟು ವಿಚಾರವಾಗಿ ಗಲಾಟೆ ನಡೆಸಿ, ಆರ್‌ಪಿಎಫ್ ಸಿಬ್ಬಂದಿ ಮೇಲೆ ರೇಜರ್ ಬ್ಲೇಡ್‌ನಿಂದ ಹಲ್ಲೆ ನಡೆಸಿದ ಆರೋಪದ ಮೇಲೆ ನಟಿ ಅಂತರಾ ಬ್ಯಾನರ್ಜಿಯನ್ನು ಪೊಲೀಸರು ಬಂಧಿಸಿದ್ದಾರೆ.
ಆಗಸ್ಟ್ 12 ರಂದು ನಡೆದ ಈ ಘಟನೆಯಲ್ಲಿ, ಸ್ಲೀಪರ್ ಕ್ಲಾಸ್ ಟಿಕೆಟ್ ಹೊಂದಿದ್ದ ನಟಿ ಎಸಿ ಕೋಚ್‌ನಲ್ಲಿ ಕುಳಿತು ಗಲಾಟೆ ಮಾಡಿದ್ದಲ್ಲದೆ, ಅಧಿಕಾರಿಯ ಯುನಿಫಾರ್ಮ್ ಮತ್ತು ಮೊಬೈಲ್ ಫೋನ್‌ಗೆ ಹಾನಿ ಮಾಡಿದ್ದಾರೆ.
ಬೊರಿವಿಲಿ ರೈಲ್ವೆ ಪೊಲೀಸರು ನಟಿಯ ವಿರುದ್ಧ ವಿವಿಧ ಕಾಯ್ದೆಗಳಡಿ ಪ್ರಕರಣ ದಾಖಲಿಸಿಕೊಂಡಿದ್ದು, ಸದ್ಯ ಅವರಿಗೆ ಜಾಮೀನು ದೊರೆತಿದೆ ಎಂದು ವರದಿಯಾಗಿದೆ.