
ನಕಲಿ ಪನೀರ್ ಹಾವಳಿಗೆ ತಡೆ ಹಾಕುವ ಉದ್ದೇಶದಿಂದ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರವು ಹೊಸ ನಿಯಮಗಳ ಕರಡು ಪ್ರಸ್ತಾಪವನ್ನು ಸಿದ್ಧಪಡಿಸಿದೆ.
ಹಾಲಿನಿಂದ ತಯಾರಿಸದ ಯಾವುದೇ ಅನಲಾಗ್ ಪನೀರ್ ಉತ್ಪನ್ನಗಳ ಲೇಬಲ್ ಮತ್ತು ಮಾರ್ಕೆಟಿಂಗ್ನಲ್ಲಿ 'ಪನೀರ್' ಹೆಸರನ್ನು ಬಳಸುವುದಕ್ಕೆ ಕಟ್ಟುನಿಟ್ಟಿನ ನಿರ್ಬಂಧ ವಿಧಿಸಲಾಗುವುದು.
ಈ ಕರಡು ನಿಯಮಗಳ ಕುರಿತು ಸಾರ್ವಜನಿಕರು 60 ದಿನಗಳ ಕಾಲ ತಮ್ಮ ಆಕ್ಷೇಪಣೆ ಹಾಗೂ ಸಲಹೆಗಳನ್ನು ಸಲ್ಲಿಸಲು ಅವಕಾಶ ನೀಡಲಾಗಿದೆ.