
ಅಕ್ಕಿ, ಬ್ರೆಡ್ ಮತ್ತು ಆಲೂಗಡ್ಡೆಯಂತಹ ಕಾರ್ಬೋಹೈಡ್ರೇಟ್ಯುಕ್ತ ಆಹಾರಗಳನ್ನು ಹೆಚ್ಚು ಸೇವಿಸುವುದರಿಂದ ರಕ್ತದಲ್ಲಿನ ಸಕ್ಕರೆ ಮತ್ತು ಇನ್ಸುಲಿನ್ ಮಟ್ಟದಲ್ಲಿ ಬದಲಾವಣೆಯಾಗಿ ನಿದ್ರೆ ಬರುತ್ತದೆ.
ಮೊಟ್ಟೆ ಮತ್ತು ಮಾಂಸದಂತಹ ಪ್ರೋಟೀನ್ ಆಹಾರಗಳಲ್ಲಿರುವ ಟ್ರಿಪ್ಟೋಫಾನ್ ಅಮೈನೋ ಆಮ್ಲಗಳು ದೇಹದಲ್ಲಿ ವಿಶ್ರಾಂತಿ ಮತ್ತು ನಿದ್ರೆಗೆ ಸಂಬಂಧಿಸಿದ ರಾಸಾಯನಿಕಗಳನ್ನು ಉತ್ಪಾದಿಸುತ್ತವೆ.
ಊಟದ ನಂತರ ನಿದ್ರೆ ಬರುವುದನ್ನು ತಡೆಯಲು ಒಂದೇ ಬಾರಿಗೆ ಹೆಚ್ಚು ಆಹಾರ ಸೇವಿಸುವುದನ್ನು ತಪ್ಪಿಸಿ, ಊಟದ ಬಳಿಕ ಸ್ವಲ್ಪ ಹೊತ್ತು ವಾಕ್ ಮಾಡುವುದು ಉತ್ತಮ.