
ನೆಲ್ಸನ್ ದಿಲೀಪ್ ಕುಮಾರ್ ನಿರ್ದೇಶನದ ರಜನಿಕಾಂತ್ ಅಭಿನಯದ ಜೈಲರ್ 2 ಸಿನಿಮಾ ಬಿಡುಗಡೆಯಾದ ನಾಲ್ಕೇ ದಿನಗಳಲ್ಲಿ ವಿಶ್ವಾದ್ಯಂತ ಬರೋಬ್ಬರಿ 424 ಕೋಟಿ ರೂಪಾಯಿಗಳಿಗೂ ಅಧಿಕ ಗ್ರಾಸ್ ಕಲೆಕ್ಷನ್ ಮಾಡಿದೆ.
ಈ ಆಕ್ಷನ್ ಮನರಂಜನಾ ಚಿತ್ರವು ಭಾನುವಾರ ಒಂದೇ ದಿನ ಭಾರತದಲ್ಲಿ 55.85 ಕೋಟಿ ರೂಪಾಯಿ ನೆಟ್ ಕಲೆಕ್ಷನ್ ದಾಖಲಿಸುವುದರೊಂದಿಗೆ ದೇಶದ ಒಟ್ಟು ನೆಟ್ ಗಳಿಕೆ 199.90 ಕೋಟಿ ರೂಪಾಯಿಗೆ ತಲುಪಿದೆ.
ವಿದೇಶಿ ಮಾರುಕಟ್ಟೆಯಿಂದಲೇ 190 ಕೋಟಿ ರೂಪಾಯಿ ಸಂಗ್ರಹವಾಗಿದ್ದು, ಸಿನಿಮಾವು ಸದ್ಯದಲ್ಲೇ 500 ಕೋಟಿ ರೂ. ಕ್ಲಬ್ ಸೇರುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿವೆ.