
ನೇಪಾಳದಲ್ಲಿ ಸಂಭವಿಸಿದ ಪ್ರವಾಹದಲ್ಲಿ 939 ಮಂದಿ ಮೃತಪಟ್ಟಿದ್ದು, 5 ಸಾವಿರಕ್ಕೂ ಅಧಿಕ ಮಂದಿ ನಾಪತ್ತೆಯಾಗಿದ್ದಾರೆ, ಇದರಲ್ಲಿ 99 ಭದ್ರತಾ ಸಿಬ್ಬಂದಿ ಮತ್ತು 591 ವಿದೇಶಿಯರು ಸೇರಿದ್ದಾರೆ.
ಭಾರತ, ಅಮೆರಿಕ, ಚೀನಾ ಸೇರಿದಂತೆ ವಿವಿಧ ದೇಶಗಳ 9,500 ಮಂದಿಯನ್ನು ರಕ್ಷಿಸಲಾಗಿದ್ದು, ಮೃತದೇಹಗಳನ್ನು ಗುರುತಿಸಲು ಭಾರತದಿಂದ 18 ವಿಧಿವಿಜ್ಞಾನ ತಜ್ಞರು ನೇಪಾಳಕ್ಕೆ ಆಗಮಿಸಿದ್ದಾರೆ.
ಉತ್ತರ ಪ್ರದೇಶದ ಕುಶಿನಗರ ಮತ್ತು ಗೋರಖ್‌ಪುರಕ್ಕೆ ನಾರಾಯಣಿ ಹಾಗೂ ಗಂಡಕಿ ನದಿಗಳ ಮೂಲಕ 13 ಮೃತದೇಹಗಳು ತೇಲಿಬಂದಿದ್ದು, ಅವುಗಳನ್ನು ಏಮ್ಸ್ ಆಸ್ಪತ್ರೆಯಲ್ಲಿ ಸಂರಕ್ಷಿಸಿಡಲಾಗಿದೆ.