
ತೆಲುಗು ಬಿಗ್ ಬಾಸ್ ಸೀಸನ್ 6ರ ಸ್ಪರ್ಧಿ ಇನಾಯಾ ಸುಲ್ತಾನಾ, ಬಿಗ್ ಬಾಸ್ ಮನೆಯಿಂದ ಜನಪ್ರಿಯತೆ ಸಿಗುತ್ತದೆಯೇ ಹೊರತು ಸಿನಿಮಾ ಅವಕಾಶಗಳು ಬರುವುದಿಲ್ಲ ಎಂದು ಹೇಳಿದ್ದಾರೆ.
ಬಿಗ್ ಬಾಸ್ ಬಳಿಕ ತಾನು ಜನಪ್ರಿಯತೆಯನ್ನು ಸರಿಯಾಗಿ ಬಳಸಿಕೊಳ್ಳಲಿಲ್ಲ ಮತ್ತು ತನ್ನ ಬಾಯ್ ಫ್ರೆಂಡ್ ಲಕ್ಷಾಂತರ ರೂಪಾಯಿ ಹಣ ದೋಚಿ ಮೋಸ ಮಾಡಿದ್ದಾನೆ ಎಂದು ನಟಿ ಆರೋಪಿಸಿದ್ದಾರೆ.
ಸಿನಿಮಾ ಅವಕಾಶಗಳಿಗಾಗಿ ಹಲವು ನಿರ್ಮಾಣ ಸಂಸ್ಥೆಗಳಿಗೆ ಖುದ್ದಾಗಿ ಹೋಗಿ ಕೇಳಿಕೊಂಡರೂ ಅವಕಾಶ ಸಿಗಲಿಲ್ಲ, ಈಗ ಕೆಲ ಸಿನಿಮಾಗಳಲ್ಲಿ ಮಾತ್ರ ನಟಿಸುತ್ತಿದ್ದೇನೆ ಎಂದು ಅವರು ತಿಳಿಸಿದ್ದಾರೆ.