
ಕನ್ವರ್ ಯಾತ್ರೆ ಮುಕ್ತಾಯದ ನಂತರ ಹರಿದ್ವಾರದ ಘಾಟ್ಗಳಲ್ಲಿ ಸುಮಾರು 7,000 ಟನ್ ತ್ಯಾಜ್ಯ ಸಂಗ್ರಹವಾಗಿದ್ದು, ಸ್ಥಳೀಯರು ಮತ್ತು ಮಠಾಧೀಶರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಬಾರಿಯ ಶ್ರಾವಣ ಮಾಸದಲ್ಲಿ ಸುಮಾರು 5 ಕೋಟಿ ಭಕ್ತರು ಹರಿದ್ವಾರಕ್ಕೆ ಭೇಟಿ ನೀಡಿದ್ದು, ಪವಿತ್ರ ಹರ್ ಕಿ ಪೌರಿ ಘಾಟ್ ಸೇರಿದಂತೆ ನೂರಕ್ಕೂ ಹೆಚ್ಚು ಕಡೆ ಪ್ಲಾಸ್ಟಿಕ್ ಮತ್ತು ಬಟ್ಟೆಗಳ ರಾಶಿ ಬಿದ್ದಿದೆ.
ಯಾತ್ರೆಯ ನಂತರ ಅಧಿಕಾರಿಗಳು ಘಾಟ್ಗಳಿಂದ ಕಸವನ್ನು ತೆರವುಗೊಳಿಸಿ ಡಂಪಿಂಗ್ ಯಾರ್ಡ್ಗಳಿಗೆ ಸಾಗಿಸಿದ್ದು, ನಗರದ ತ್ಯಾಜ್ಯ ವಿಲೇವಾರಿ ಘಟಕಗಳಲ್ಲಿ ಕಸದ ಬೆಟ್ಟಗಳೇ ಸೃಷ್ಟಿಯಾಗಿವೆ.