
ಹುಬ್ಬಳ್ಳಿಯಲ್ಲಿ ಮಾಂಜಾ ದಾರದಿಂದ ಸಾಲು ಸಾಲು ಅವಘಡಗಳು ಮತ್ತು ಮಹಿಳೆಯೊಬ್ಬರ ಮರಣದ ಬೆನ್ನಲ್ಲೇ ಪೊಲೀಸರು ಮಾರಾಟಗಾರರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸುತ್ತಿದ್ದಾರೆ.
ಪೊಲೀಸರ ಕಠಿಣ ಕ್ರಮದಿಂದಾಗಿ ಅಂಗಡಿಗಳಲ್ಲಿ ಮಾಂಜಾ ಮಾರಾಟ ನಿಂತಿದ್ದರೂ, ಗಾಳಿಪಟ ವ್ಯಾಪಾರಸ್ಥರು ಸಾವಿರಾರು ಗಾಳಿಪಟಗಳು ಮಾರಾಟವಾಗದೆ ಕಂಗಾಲಾಗಿದ್ದಾರೆ.
ಆದರೆ ಸಾವಿರ ರೂಪಾಯಿ ನೀಡಿದರೆ ಆನ್‌ಲೈನ್ ಮಾರ್ಕೆಟ್‌ಗಳಲ್ಲಿ ಮಾಂಜಾ ದಾರ ಸುಲಭವಾಗಿ ಸಿಗುತ್ತಿರುವುದರಿಂದ, ಆನ್ ಲೈನ್ ಮಾರಾಟಕ್ಕೂ ಬ್ರೇಕ್ ಹಾಕುವಂತೆ ವ್ಯಾಪಾರಿಗಳು ಆಗ್ರಹಿಸಿದ್ದಾರೆ.