
ಮಹಿಳಾ ಪ್ರೀಮಿಯರ್ ಲೀಗ್ (ಡಬ್ಲ್ಯೂಪಿಎಲ್) 2027ರ 5ನೇ ಆವೃತ್ತಿಯ ದಿನಾಂಕಗಳನ್ನು ಬಿಸಿಸಿಐ ಘೋಷಿಸಿದ್ದು, ಪಂದ್ಯಾವಳಿಯು ಮುಂದಿನ ವರ್ಷ ಜನವರಿ 14 ರಿಂದ ಫೆಬ್ರವರಿ 27 ರವರೆಗೆ ನಡೆಯಲಿದೆ.
ಫ್ರಾಂಚೈಸಿಗಳು ಆಟಗಾರ್ತಿಯರ ಪಟ್ಟಿಯನ್ನು ಅಂತಿಮಗೊಳಿಸಲು ಸೆಪ್ಟೆಂಬರ್ 28ರವರೆಗೆ ಗಡುವು ನೀಡಲಾಗಿದ್ದು, ಮಿನಿ ಹರಾಜು ಅಕ್ಟೋಬರ್ 29ರಂದು ಕೊಚ್ಚಿಯಲ್ಲಿ ನಡೆಯುವ ನಿರೀಕ್ಷೆಯಿದೆ.
ಸ್ಮೃತಿ ಮಂಧನಾ ನಾಯಕತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಹಾಲಿ ಚಾಂಪಿಯನ್ ಆಗಿ ಕಣಕ್ಕಿಳಿಯಲಿದೆ.