
ನಟ ಕಮಲ್ ಹಾಸನ್ ಹುಟ್ಟುಹಬ್ಬದ ದಿನವಾದ ನವೆಂಬರ್ 7ರಂದು ಹೊಸ ಸಿನಿಮಾದ ಶೂಟಿಂಗ್ ಆರಂಭವಾಗಿದ್ದು, ಎಸ್.ಯು. ಅರುಣ್ ಕುಮಾರ್ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ.
ಈ ಚಿತ್ರಕ್ಕೆ 22 ವರ್ಷಗಳ ಹಿಂದೆ ಕಮಲ್ ಹಾಸನ್ ನಿರ್ದೇಶನದ ಚಿತ್ರವೊಂದಕ್ಕೆ ಇಡಲಾಗಿ ವಿವಾದಕ್ಕೊಳಗಾಗಿದ್ದ 'ಸಂದಿಯಾರ್' ಹೆಸರನ್ನೇ ಇಡಲಾಗಿದೆ.
ಅಂದು ತೀವ್ರ ಪ್ರತಿಭಟನೆಗಳ ಕಾರಣಕ್ಕೆ ಆ ಸಿನಿಮಾದ ಹೆಸರನ್ನು 'ವಿರುಮಾಂಡಿ' ಎಂದು ಬದಲಾಯಿಸಲಾಗಿತ್ತು, ಆದರೆ ಈಗ ಅದೇ ಹೆಸರನ್ನು ಮತ್ತೆ ಆಯ್ಕೆ ಮಾಡಲಾಗಿದೆ.