Indian Politics
ಖಾಸಗಿ ಶಾಲೆಗಳ ಮಾನ್ಯತೆ ಹಗರಣ: ಮಾಜಿ ಸಚಿವ ಅನ್ಬಿಲ್‌ ಮಹೇಶ್‌ ಬಂಧನ

ಖಾಸಗಿ ಶಾಲೆಗಳ ಮಾನ್ಯತೆ ಹಗರಣ: ಮಾಜಿ ಸಚಿವ ಅನ್ಬಿಲ್‌ ಮಹೇಶ್‌ ಬಂಧನ

prajavani2h
THE BRIEF
1

ಖಾಸಗಿ ಶಾಲೆಗಳಿಗೆ ಮಾನ್ಯತೆ ನೀಡುವ ವೇಳೆ ಲಂಚ ಪಡೆದ ಆರೋಪದ ಮೇಲೆ ಡಿಎಂಕೆ ನಾಯಕ ಹಾಗೂ ಶಾಲಾ ಶಿಕ್ಷಣ ಖಾತೆಯ ಮಾಜಿ ಸಚಿವ ಅನ್ಬಿಲ್‌ ಮಹೇಶ್‌ ಪೊಯ್ಯಮೋಳಿ ಅವರನ್ನು ಸೋಮವಾರ ಬಂಧಿಸಲಾಗಿದೆ.

2

ಅನ್ಬಿಲ್‌ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಮದ್ರಾಸ್‌ ಹೈಕೋರ್ಟ್‌ ತಿರಸ್ಕರಿಸಿದ ಬೆನ್ನಲ್ಲೇ ಗ್ರೇಟರ್‌ ಚೆನ್ನೈನ ಅಪರಾಧ ವಿಭಾಗದ ಪೊಲೀಸರು ಈ ಕ್ರಮ ಕೈಗೊಂಡಿದ್ದಾರೆ.

3

ಶಾಶ್ವತವಾಗಿ ಸರ್ಕಾರಿ ಮಾನ್ಯತೆ ನೀಡಲು 177 ಖಾಸಗಿ ಶಾಲೆಗಳಿಂದ ₹100 ಕೋಟಿ ಲಂಚ ಪಡೆದಿರುವ ಆರೋಪದ ಮೇಲೆ ಭ್ರಷ್ಟಾಚಾರ ತಡೆ ಕಾಯ್ದೆಯಡಿ ಅವರ ವಿರುದ್ಧ ಪ್ರಕರಣ ದಾಖಲಾಗಿತ್ತು.