
ಸೆಪ್ಟೆಂಬರ್ 26 ಮತ್ತು 27, 2026ರಂದು ನಿಗದಿಯಾಗಿರುವ ಎಹೆಚ್‌ಒ ಮತ್ತು ಎಡಿಹೆಚ್ ಹುದ್ದೆಗಳ ಪರೀಕ್ಷಾ ದಿನಾಂಕಗಳನ್ನು ಮುಂದೂಡುವಂತೆ ವಿಪಕ್ಷ ನಾಯಕ ಆರ್. ಅಶೋಕ್ ಸರ್ಕಾರವನ್ನು ಆಗ್ರಹಿಸಿದ್ದಾರೆ.
ಇದೇ ದಿನಾಂಕಗಳಲ್ಲಿ ಎಸ್‌ಎಸ್‌ಸಿ ಮತ್ತು ಎಸ್‌ಬಿಐ ಕ್ಲರ್ಕ್ ಪರೀಕ್ಷೆಗಳೂ ಇರುವುದರಿಂದ ಸಾವಿರಾರು ಅಭ್ಯರ್ಥಿಗಳು ಅವಕಾಶ ಕಳೆದುಕೊಳ್ಳುವ ಆತಂಕದಲ್ಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.
8 ವರ್ಷಗಳ ಸುದೀರ್ಘ ಕಾಯುವಿಕೆಯ ನಂತರ ನಡೆಯುತ್ತಿರುವ ಈ ನೇಮಕಾತಿ ಪರೀಕ್ಷೆಗಳಿಗೆ ಅಭ್ಯರ್ಥಿಗಳ ಹಿತದೃಷ್ಟಿಯಿಂದ ಹೊಸ ದಿನಾಂಕವನ್ನು ನಿಗದಿಪಡಿಸಬೇಕೆಂದು ಅವರು ಒತ್ತಾಯಿಸಿದ್ದಾರೆ.