
ಉತ್ತರಾಖಂಡದ ಪ್ರಸಿದ್ಧ ಯಾತ್ರಾ ಸ್ಥಳವಾದ ಕೇದಾರನಾಥ ಧಾಮದಲ್ಲಿ ನಿರಂತರ ಹಿಮಪಾತ ವರದಿಯಾಗಿದ್ದು, ಇಡೀ ಕ್ಷೇತ್ರ ಶೀತಲ ವಾತಾವರಣದಿಂದ ಆವೃತಗೊಂಡಿದೆ.
ಭಕ್ತರ ಸುರಕ್ಷತೆಗಾಗಿ ಜಿಲ್ಲಾಡಳಿತವು ವೈದ್ಯಕೀಯ ತಂಡಗಳು ಮತ್ತು ತುರ್ತು ಚಿಕಿತ್ಸಾ ವ್ಯವಸ್ಥೆಯನ್ನು ಸಜ್ಜಾಗಿರಿಸಿದೆ.
ಪ್ರಮುಖ ಕಾಲುದಾರಿಗಳು ಮತ್ತು ತಂಗುದಾಣಗಳಲ್ಲಿ ಬೆಂಕಿ ಕಾಯಿಸಿಕೊಳ್ಳಲು ಬೋನ್ ಫೈಯರ್ ವ್ಯವಸ್ಥೆ ಮಾಡಲಾಗಿದೆ.