ಬಿಡಿಎ ತನ್ನ ಡಾ. ಕೆ. ಶಿವರಾಮ ಕಾರಂತ ಬಡಾವಣೆಯ ನಿವೇಶನಗಳ ದರವನ್ನು ಪ್ರತಿ ಚದರ ಅಡಿಗೆ 6,000 ರೂ.ಗೆ ಏರಿಕೆ ಮಾಡಿದ್ದು, 30x40 ಅಳತೆಯ ಸೈಟ್ ಬೆಲೆ 72 ಲಕ್ಷ ರೂ. ತಲುಪಿದೆ.
2023ರ ಅಂತ್ಯದಲ್ಲಿ ಪ್ರತಿ ಚದರ ಅಡಿಗೆ 4,900 ರೂ. ಇದ್ದ ದರವನ್ನು ಈಗ 1,000 ರೂ. ಹೆಚ್ಚಿಸಲಾಗಿದ್ದು, ಮೊದಲ ಹಂತದಲ್ಲಿ 3,000 ನಿವೇಶನಗಳಿಗೆ ಅರ್ಜಿ ಆಹ್ವಾನಿಸಲು ಬಿಡಿಎ ಸಿದ್ಧತೆ ನಡೆಸಿದೆ.
ಒಟ್ಟು 3,069 ಎಕರೆ ಪ್ರದೇಶದಲ್ಲಿ 34,000 ನಿವೇಶನಗಳನ್ನು ನಿರ್ಮಿಸುವ ಗುರಿ ಹೊಂದಿರುವ ಈ ಯೋಜನೆಯಲ್ಲಿ, ಭೂಮಿ ನೀಡಿದ ರೈತರಿಗೆ ರ್ಯಾಂಡಮೈಸೇಷನ್ ತಂತ್ರಜ್ಞಾನದ ಮೂಲಕ 18,000 ನಿವೇಶನಗಳನ್ನು ಹಂಚಿಕೆ ಮಾಡಲಾಗುತ್ತದೆ.