Technology
ಮುಲ್ಕಿ ದೇವಸ್ಥಾನದಲ್ಲಿ ಕಳ್ಳತನ ಯತ್ನ: ಸಿಸಿಟಿವಿ ಅಲಾರಾಂನಿಂದ ತಪ್ಪಿದ ಅನಾಹುತ

ಮುಲ್ಕಿ ದೇವಸ್ಥಾನದಲ್ಲಿ ಕಳ್ಳತನ ಯತ್ನ: ಸಿಸಿಟಿವಿ ಅಲಾರಾಂನಿಂದ ತಪ್ಪಿದ ಅನಾಹುತ

tv9kannada2h
THE BRIEF
1

ದಕ್ಷಿಣ ಕನ್ನಡ ಜಿಲ್ಲೆಯ ಮುಲ್ಕಿ ತಾಲೂಕಿನ ಬೆಳ್ಳಾಯರು ಗ್ರಾಮದ ಶ್ರೀ ಚಂದ್ರಮೌಳೀಶ್ವರ ದೇವಸ್ಥಾನದಲ್ಲಿ ಕಳ್ಳತನಕ್ಕೆ ಯತ್ನಿಸಿದ ವಿರಾಜಪೇಟೆ ಮೂಲದ ರವಿ (28) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

2

ಆರೋಪಿ ಸಿಸಿಟಿವಿ ಕ್ಯಾಮೆರಾವನ್ನು ಧ್ವಂಸಗೊಳಿಸಲು ಯತ್ನಿಸಿದಾಗ, ಕುಂದಾಪುರ ಮೂಲದ ‘ಸೈನ್ ಇನ್ ಸೆಕ್ಯೂರಿಟಿ’ ಕಂಪನಿಯ ಕಂಟ್ರೋಲ್ ರೂಮ್‌ಗೆ ತುರ್ತು ಅಲರ್ಟ್ ಸಂದೇಶ ರವಾನೆಯಾಗಿದೆ.

3

ಅಲರ್ಟ್ ಪಡೆದ ಮುಲ್ಕಿ ಪೊಲೀಸ್ ಠಾಣೆಯ ಸಬ್ ಇನ್‌ಸ್ಪೆಕ್ಟರ್ ರಾಘವೇಂದ್ರ ನಾಯಕ್ ಮತ್ತು ಸ್ಥಳೀಯರು ತಕ್ಷಣ ಸ್ಥಳಕ್ಕೆ ಧಾವಿಸಿ ದೇವಸ್ಥಾನದ ಒಳಗೆ ಅಡಗಿದ್ದ ಆರೋಪಿಯನ್ನು ರೆಡ್‌ಹ್ಯಾಂಡ್‌ ಆಗಿ ಹಿಡಿದಿದ್ದಾರೆ.