
2009ರಲ್ಲಿ ಭಾರತ ಪ್ರವಾಸದಲ್ಲಿದ್ದ ಜಪಾನ್ನ ಟಕಮಾಸ ಒಜಾವಾ ಅವರು ಕೊಯಮತ್ತೂರಿನಲ್ಲಿ ಸವಿದ ಬಿರಿಯಾನಿಯಿಂದ ಪ್ರೇರಿತರಾಗಿ, 15 ವರ್ಷಗಳ ನಂತರ ಟೋಕಿಯೊದಲ್ಲಿ ರೆಸ್ಟೋರೆಂಟ್ ಆರಂಭಿಸಿದ್ದಾರೆ.
ಅವರು ನಡೆಸುತ್ತಿರುವ ‘ಬಿರಿಯಾನಿ ಓಸಾವಾ’ ರೆಸ್ಟೋರೆಂಟ್ಗೆ 2026ರಲ್ಲಿ ಪ್ರತಿಷ್ಠಿತ ಮೈಕೆಲಿನ್ ಬಿಬ್ ಗೌರ್ಮಾಂಡ್ ಗೌರವ ಲಭಿಸಿದೆ.
ಹೈದರಾಬಾದಿ, ಕೊಲ್ಕತ್ತಾ ಮತ್ತು ಪಾಕಿಸ್ತಾನಿ ಶೈಲಿಗಳನ್ನು ಮೇಳೈಸಿ ವಿಶಿಷ್ಟ ಬಿರಿಯಾನಿ ತಯಾರಿಸುವ ಓಜಾವಾ, ತಮಿಳುನಾಡಿನ ಬಿರಿಯಾನಿ ತಮ್ಮ ನೆಚ್ಚಿನದು ಎಂದು ಹೇಳಿದ್ದಾರೆ.