
ಡ್ಯಾನಿಯಲ್ ಕ್ರೇಗ್ ನಿವೃತ್ತಿಯ ನಂತರ, ಅಮೆಜಾನ್ ಎಂಜಿಎಂ ಸಂಸ್ಥೆಯು ಹೊಸ ಜೇಮ್ಸ್ ಬಾಂಡ್ ಪಾತ್ರಕ್ಕಾಗಿ ಸ್ಕಾಟ್ಲೆಂಡ್ನ ನಟ ಜಾಕ್ ಲೋಡನ್ ಅವರನ್ನು ಆಯ್ಕೆ ಮಾಡಿದೆ ಎಂದು ವರದಿಯಾಗಿದೆ.
2010ರಿಂದ ನಟನೆಯಲ್ಲಿ ತೊಡಗಿರುವ ಜಾಕ್ ಲೋಡನ್ ಎರಡು ಬಾರಿ ಗೋಲ್ಡನ್ ಗ್ಲೋಬ್ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದ್ದು, ಚಿತ್ರಕಥೆಗಾರ ಸ್ಟಿವನ್ ನೈಟ್ ಹೊಸ ಸಿನಿಮಾದ ಚಿತ್ರಕಥೆಯನ್ನು ಪೂರ್ಣಗೊಳಿಸಿದ್ದಾರೆ.
ನಿರ್ಮಾಣ ಸಂಸ್ಥೆಯು ಹೊಸ ಬಾಂಡ್ ಆಯ್ಕೆಯನ್ನು ಗೌಪ್ಯವಾಗಿ ಇರಿಸಿದ್ದು, ದೊಡ್ಡ ವೇದಿಕೆಯಲ್ಲಿ ಅಧಿಕೃತವಾಗಿ ಪರಿಚಯಿಸಲು ಸಿದ್ಧತೆ ನಡೆಸುತ್ತಿದೆ.