
ಮಾಜಿ ಕ್ರಿಕೆಟಿಗ ಎಂ.ಎಸ್. ಧೋನಿ ಅವರು ಚೆನ್ನೈನ ಮದ್ರಾಸ್ ಇಂಟರ್ನ್ಯಾಷನಲ್ ಸರ್ಕ್ಯೂಟ್ನಲ್ಲಿ ಸೂಪರ್ ಬೈಕ್ ಓಡಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಟಿವಿಎಸ್ ಯೂರೋಗ್ರಿಪ್ ಕಂಪನಿಯ ಜಾಹೀರಾತು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ 45 ವರ್ಷದ ಧೋನಿ, ರೇಸಿಂಗ್ ಟ್ರ್ಯಾಕ್ನಲ್ಲಿ ವಿವಿಧ ಟೈಯರ್ಗಳನ್ನು ಪರೀಕ್ಷಿಸಲು ವೇಗವಾಗಿ ಬೈಕ್ ರೈಡಿಂಗ್ ಮಾಡಿದ್ದಾರೆ.
2026ರ ಐಪಿಎಲ್ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಭಾಗವಾಗಿದ್ದ ಧೋನಿ, ಗಾಯದ ಸಮಸ್ಯೆಯಿಂದಾಗಿ ಟೂರ್ನಿಯ ಯಾವುದೇ ಪಂದ್ಯದಲ್ಲಿ ಆಡಿರಲಿಲ್ಲ.